Header image

Jnanayogi Shri Siddeshwar Swamiji

Pujya Shri Siddeshwar Swamiji is an exemplary of divinity and simplicity. He is renowned as “Nadedado Narayan” among his followers. Justifying this name which means living God, Shri Siddeshwar Swamiji has been taking Godly efforts for the upliftment and development of the society. An efficient teacher, a humanitarian, a true spiritual soul and a scholar in various discourses, Shri Siddeshwar Swamiji is one of the most eminent spiritual leaders of this era. The focus of his preachings is global happiness and ways to attain it. His followers testify how his preachings and guidance changed their lives. With utmost devotion, they say he is a living god as he fills their lives with happiness. Without surrendering to and other luxuries, Swamiji continues his efforts for a happier world. Jnanayogi Shri Siddheshwar swamiji, who is often referred to as the ‘Walking God of North Karnataka’ was born and brought up in Bijjaragi, Tal/Dist Vijayapura, Karnataka State.

Shri Siddeshwar Swamiji has transformed the lives of many people in India. His approach is to teach lessons for the life from the spiritual word. His lecture series “Badukuvudu Hege (How do we lead life)” has transformed millions of Indians. People have appreciated the practical lessons on contentment and happiness in life. Shri Siddeshwar Swamiji is also an author of various books. They cover spiritual discourses and lessons from the Upanishads and Bhagavad Gita and also about solutions for problems we come across in daily life.

About Shri Siddeshwar Swamiji

Buddiji “Shri Siddeshwara Swamiji” Jnana Yogashram Vijayapura (Karnataka State, India) is one of the best spiritual thinker, well known for his speech about life. So many people have changed their view about life. He made realization of actual life. He made so many’s life simple, perfect and full of satisfaction.

“Shri Siddeshwara Swamiji”, who is well known as Nadedado Narayan (Living god) has been a real and live example of being godliness. His discourses bring tremendous transformation into everyone’s life and ultimately leading to peaceful and happy life. Jnanayogi Shri Siddheshwar swamiji, who is often referred to as the ‘Walking God of North Karnataka’ was born and brought up in Bijjaragi, Tal/Dist Vijayapura, Karnataka State.

After studying at the school till fourth standard in native place, Buddiji came to Mallikarjuna Swamiji. Siddheswara’s agility was not delayed by the fact that Mallikarjuna Swamiji was ‘in the root of the growing pea’. They took Siddheshwar to places where they could preach. Along with his spiritual activity, he continued to study college. After graduating from Karnataka University, he passed MA degree in philosophy from Kolhapur University to Post Graduate Education. At the age of 19 Shri Siddeshwara Swamiji wrote “Siddantha Shiromani” book in guidance of Shri Mallikarjun Swamiji.

There are so many examples of human beings being divine down the ages. Shri Siddeshwar Swamiji is one of those human beings who is a living god. Words may fall short in describing his qualities. His thoughts can be understood from an Illitrite to well litrate. He preaches very hard things in a very understanding and enjoying manner. His discourses are well known for every person in North Karnataka. His importance can only be known in his presence. He is the founder of Jnana Yogaashrama in Vijayapura, Karnataka. Credit of making lives of thousands of people joyful through his words and work goes to him. He is the saint to be seen, to be worshiped, to be loved, to be known and to be talked of.

Shri Siddeshwar Swamiji has transformed the lives of many people in India. His approach is to teach lessons for the life from the spiritual word. His lecture series “Badukuvudu Hege, How do we lead life” has transformed millions of Indians. People have appreciated the practical lessons on contentment and happiness in life.

Shri Siddeshwar Swamiji is authentic speaker on Allama Prabhu’s Vachanas. He has thrown new light on the understanding of Vachanas. Best of his lecture’s come out when comparison of world’s philosophers are put into perspective on a particular subject.

Shri Siddeshwar Swamiji lives simple inspiring life style. Leads contentment life by example. Philosopher, thinker swamiji has traveled throughout the world delivering spiritual discourses. He holds a postgraduate degree in Philosophy. He has delved deep into spirituality and has written several books based on the works of Saints and Seers of India. Shri Swamiji’s discourses on Vedantha, The Gita, Yogasutra, Vachana are known for their originality, thinking, expression and contemplation. Shri Swamiji has edited his own preceptor’s “Pathanjali’s Yogasuthra” with great scholarly erudition. Shri Siddheshwar Swamiji’s simplicity, detachment, yogic moods, compassion, creative approach to spiritual issues and his incomparable calm and composition really make the audience feel elated and enlightened. His discourses are known for their precision and penetration attracting the layman and the learned alike.

ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರ ಪರಿಚಯ

ಶಾಂತತೆಯೇ ಮೂರ್ತಿವೆತ್ತಂತೆ ಸ್ಥಿತಪ್ರಜ್ಞತೆಯಿಂದ, ಸರಳ ನಡೆನುಡಿಯಿಂದ, ಪ್ರಭಾವಿ ಪ್ರವಚನಗಳ ಮೂಲಕ ದೇಶ- ವಿದೇಶಗಳಲ್ಲಿ ಅನುಯಾಯಿಗಳನ್ನು ಸಂಪಾದಿಸಿದವರು ಸಿದ್ಧೇಶ್ವರ ಶ್ರೀಗಳು. ‘ನಡೆದಾಡುವ ದೇವರು’ ಎಂದೇ ಖ್ಯಾತರಾಗಿದ್ದಾರೆ. ತಮ್ಮ ಪ್ರವಚನದಲ್ಲಿ ಅಧ್ಯಾತ್ಮ, ವೇದಾಂತಗಳನ್ನು ದೃಷ್ಟಾಂತಗಳ ಮೂಲಕ ಎಳೆ ಎಳೆಯಾಗಿ ಬಿಡಿಸಿ ಹೇಳುತ್ತಿದ್ದರೆ ಕೇಳುಗರ ಕರ್ಣಾನಂದ ವರ್ಣಿಸಲಸದಳ. ಸಕಲ ಸಿದ್ಧಾಂತಗಳ ಒಳ್ಳೆಯ ಅಂಶಗಳನ್ನು ಒಟ್ಟುಗೂಡಿಸಿ ಅದನ್ನು ಸರಳವಾಗಿ ಅರ್ಥೈಸುವಂತೆ ವಿವರಿಸುವ ಪರಿ ಅಮೋಘ.

ಖ್ಯಾತ ಚಿತ್ರ ಕಲಾವಿದರಾದ ಬಿಜ್ಜರಗಿಯ ಓಗಪ್ಪ ಸಿದಗೊಂಡ ಬಿರಾದಾರ ಪಾಟೀಲ ಹಾಗೂ ಸಂಗಮ್ಮ ದಂಪತಿಗೆ ಮೂವರು ಪುತ್ರರು ಹಾಗೂ ಮೂವರು ಪುತ್ರಿಯರು. ಅವರಲ್ಲಿ ಚೊಚ್ಚಲ ಮಗನೇ ಸಿದಗೊಂಡ (ಸಿದ್ಧೇಶ್ವರ ಶ್ರೀಗಳು). 1940 ಅಕ್ಟೋಬರ್ 24ರಂದು ಜನಿಸಿದರು. ಬಾಲ್ಯದಿಂದಲೂ ಅವರಿಗೆ ಬಿಳಿ ಬಟ್ಟೆಯ ಮೇಲೆ ಎಲ್ಲಿಲ್ಲದ ವ್ಯಾಮೋಹ. ತಾಯಿ ಸ್ನಾನ ಮಾಡಿಸಿ ಬಣ್ಣದ ಬಟ್ಟೆ ತೊಡಿಸಿದರೆ ಅದನ್ನು ಹರಿದು ಹಾಕುತ್ತಿದ್ದರಂತೆ. ಅವರ ಪ್ರಾಥಮಿಕ ಶಿಕ್ಷಣ ಬಿಜ್ಜರಗಿಯಲ್ಲೇ ಆಯಿತು. 1955-56ರಲ್ಲಿ ಮುಲ್ಕಿ (7ನೇ ವರ್ಗ) ಪರೀಕ್ಷೆಗೆಂದು ವಿಜಯಪುರದ ಶ್ರೀ ಸಿದ್ಧೇಶ್ವರ ಪದವಿ ಪೂರ್ವ ಕಾಲೇಜಿಗೆ ಪರೀಕ್ಷೆ ಬರೆಯಲು ಬಂದಾಗ ಶಾಲೆ ಸಮೀಪ ಇದ್ದ ಶಿವಾನುಭವ ಮಂಟಪದಲ್ಲಿ ವೇದಾಂತ ಕೇಸರಿ ಶ್ರೀ ಮಲ್ಲಿಕಾರ್ಜುನ ಶ್ರೀಗಳು ಮಾಡುತ್ತಿದ್ದ ಅಧ್ಯಾತ್ಮ ಪ್ರವಚನ ಈ ಹುಡುಗನ ಮನಸ್ಸನ್ನು ಸೆಳೆಯಿತು.

ಪರೀಕ್ಷೆ ಮುಗಿಸಿ ಸಹಪಾಠಿಗಳು ಬಿಜ್ಜರಗಿಗೆ ಹಿಂತಿರುಗಿದರೆ, ಸಿದಗೊಂಡ ಊರಿಗೆ ಮರಳದೆ ಗುರುವಿನ ಆಶ್ರಯಕ್ಕೆ ಹಂಬಲಿಸಿ ವಿಜಯಪುರದಲ್ಲೇ ಉಳಿದ. ಬೆಳಗ್ಗೆ ಪ್ರವಚನ ಕೇಳಿ ರಾತ್ರಿ ಶ್ರೀಗಳು ತಂಗುತ್ತಿದ್ದ ಕೋಣೆಯ ಮುಂಭಾಗದಲ್ಲೇ ಮಲಗುತ್ತಿದ್ದ. ಈ ಹುಡುಗನನ್ನು ಗಮನಿಸಿದ ಮಲ್ಲಿಕಾರ್ಜುನ ಶ್ರೀಗಳು ಚಕಿತರಾಗಿ ಆತನ ಬಗ್ಗೆ ವಿಚಾರಿಸಿ ಊರಿಗೆ ಕಳಿಸುವಂತೆ ಅಪ್ಪಣೆ ಕೊಟ್ಟರು. ಆದರೆ ಊರಿಗೆ ತೆರಳಿದ ಸಿದಗೊಂಡ ಮತ್ತೆ ವಿಜಯಪುರಕ್ಕೆ ಹಿಂದಿರುಗಿ ಶ್ರೀಗಳ ಪ್ರವಚನ ಕೇಳುವುದು, ಅವರ ಕೋಣೆಯ ಮುಂದೆ ಮಲಗು ವುದನ್ನು ಮಾಡುತ್ತಿದ್ದ. ಇದನ್ನು ಕಂಡ ಮಲ್ಲಿಕಾರ್ಜುನ ಶ್ರೀಗಳು ಹುಡುಗನ ತಂದೆಯನ್ನು ಕರೆಸಿ, ‘ಈತ ಒಂದಿಷ್ಟು ದಿನ ನಮ್ಮಲ್ಲಿಯೇ ಇರಲಿ. ಅವನಿಗೆ ತಿಳಿಹೇಳಿ ಕಳಿಸುತ್ತೇವೆ, ಎಂದು ಹೇಳಿದರಂತೆ

1957ರಲ್ಲಿ ಮಲ್ಲಿಕಾರ್ಜುನ ಶ್ರೀಗಳು ಚಡಚಣದಲ್ಲಿ ಪ್ರವಚನ ನಡೆಸಿದಾಗ ಸಿದಗೊಂಡನನ್ನೂ ತಮ್ಮೊಂದಿಗೆ ಕರೆದುಕೊಂಡು ಹೋದರು. ಅಲ್ಲಿಯೇ ಆತನನ್ನು ಪ್ರೌಢಶಾಲೆಗೆ ಸೇರಿಸಿ ಮುಂದಿನ ಶಿಕ್ಷಣಕ್ಕೆ ಅನುವು ಮಾಡಿಕೊಟ್ಟರು. 1958ರಲ್ಲಿ ಚಡಚಣದಲ್ಲಿ ಪ್ರವಚನ ಮುಕ್ತಾಯ ಸಮಾರಂಭದಲ್ಲಿ ಸಿದಗೊಂಡನನ್ನು ಅಧಿಕೃತವಾಗಿ ಶಿಷ್ಯನನ್ನಾಗಿ ಸ್ವೀಕರಿಸಿ ‘ಸಿದ್ಧೇಶ್ವರ’ ಎಂದು ನಾಮಕರಣ ಮಾಡಿದರು.

1960ರಲ್ಲಿ ಮಲ್ಲಿಕಾರ್ಜುನ ಶ್ರೀಗಳು ಕೊಲ್ಹಾಪುರದಲ್ಲಿ ಮರಾಠಿಯಲ್ಲಿ ಸಿದ್ಧಾಂತ ಶಿಖಾಮಣಿ ಪ್ರವಚನ ಮಾಡುತ್ತಿರುವಾಗ, ತಮ್ಮ ಪ್ರಿಯಶಿಷ್ಯನಿಗೆ ಅದನ್ನು ಕನ್ನಡದಲ್ಲಿ ಟಿಪ್ಪಣಿ ಮಾಡಲು ಹೇಳಿದರಂತೆ. ಪ್ರವಚನ ಮುಕ್ತಾಯ ಸಮಾರಂಭದ ಹೊತ್ತಿಗೆ ಅದು 400 ಪುಟಗಳ ಹೊತ್ತಿಗೆಯಾಗಿತ್ತು. ಶಿಷ್ಯನ ಅದ್ಭುತ ಬರವಣಿಗೆ ಕಂಡು ಮಲ್ಲಿಕಾರ್ಜುನ ಶ್ರೀಗಳು ಅದನ್ನು ಮುದ್ರಿಸಿದರು. ಅದೇ ‘ಸಿದ್ಧಾಂತ ಶಿಖಾಮಣಿ’ ಗ್ರಂಥದ ಮೊದಲ ಆವೃತ್ತಿ. ಮಲ್ಲಿಕಾರ್ಜುನ ಶ್ರೀಗಳ ಕೃಪಾಶೀರ್ವಾದದಿಂದ ವಿಜಯಪುರ ಸೇರಿದಂತೆ ವಿವಿಧೆಡೆ ಪುರಾಣ ಪ್ರವಚನ ನೀಡತೊಡಗಿದ ಸಿದ್ಧೇಶ್ವರ ಶ್ರೀಗಳು ಅನತಿ ಕಾಲದಲ್ಲೇ ಜನರನ್ನು ಸೂಜಿಗಲ್ಲಿನಂತೆ ಸೆಳೆದರು. ಅವರ ಅಗಾಧ ಪಾಂಡಿತ್ಯಕ್ಕೆ ಬೆರಗಾದ ಜಿಲ್ಲೆಯ ಜನ ಅವರನ್ನು ‘ಬುದ್ಧೀಜಿ’ ಎಂದು ಕರೆಯಲಾರಂಭಿಸಿದರು.

ಸಿದ್ದೇಶ್ವರರ ಮಾತು ಎಂದರೆ ಮಲ್ಲಿಕಾರ್ಜುನ ಸ್ವಾಮಿಗಳಿಗೆ ಬಲು ಪ್ರೀತಿ. ಆತ ಮಹಾ ಬುದ್ದಿವಂತ, ಆಧ್ಯಾತ್ಮಿಕದಂತೆ ಲೌಕಿಕ ವಿಷಯಗಳಲ್ಲೂ ವಿಶೇಷ ಪರಿಜ್ಞಾನವಿದೆ. ಮುಂದೆ ಜಗತ್ತಿಗೇ ದೊಡ್ಡವನಾಗುತ್ತಾನೆ ಎಂದು ವಿಶ್ವಾಸದಿಂದ ಎಲ್ಲರೆದುರು ಹೇಳುತ್ತಿದ್ದರು. ಸ್ನಾತಕೋತ್ತರ ಪದವಿ ಪಡೆದು ಬಿಜಾಪುರಕ್ಕೆ ಹಿಂದಿರುಗಿದ ನಂತರ ಸಿದ್ದೇಶ್ವರರಿಗೆ ಭಗವದ್ಗೀತೆಯ ಬಗ್ಗೆ, ಉಪನಿಷತ್ತುಗಳ ಬಗ್ಗೆ ಮಲ್ಲಿಕಾರ್ಜುನ ಸ್ವಾಮಿಗಳು ವ್ಯಾಖ್ಯಾನವನ್ನು ನೀಡಿ ಅವರ ಜ್ಙಾನದಿಗಂತವನ್ನು ವಿಸೃತಗೊಳಿಸಿದರು. ಪೂಜ್ಯರು ಉಪನಿಷತ್ತುಗಳು, ಭಗವದ್ಗೀತೆ,ಯೋಗಸೂತ್ರ,ವಚನಶಾಸ್ತ್ರ ಮುಂತಾದ ವಿಷಯಗಳ ಬಗೆಗೆ ತಾವು ಹೇಗೆ ಗುರು ಮುಖೇನ ಕಲಿತ ಜ್ಙಾನವನ್ನು ಬಳಸಿಕೊಂಡು ಬೋದಪ್ರದ ಪ್ರವಚನಗಳನ್ನು ನೀಡುತ್ತಿದ್ದಾರೆ. ಗಹನವಾದ ವೇದಾಂತ ತತ್ವಗಳನ್ನು ಅತ್ಯಂತ ಸರಳವಾಗಿ ಜನಮಾನಸದಲ್ಲಿ ಉಳಿಯುವಂತೆ ವಿವರಿಸುವುದೇ ಅವರ ವೈಶಿಷ್ಟ್ಯ

ಬಿಜಾಪುರ ಜ್ಞಾನಯೋಗಾಶ್ರಮದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಶ್ರೀ ಸಿದ್ಧೇಶ್ವರರು ತಮ್ಮ ಗುರುಗಳ ಮಾರ್ಗದರ್ಶನದಲ್ಲೇ ಆಶ್ರಮದ ಚಟುವಟಿಕೆಗಳನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ. ಸಿದ್ದೇಶ್ವರರ ಪ್ರವಚನ ಕೇಳಿದವರು ಅದರಲ್ಲೇ ಅನುರಕ್ತರಾಗಿ ಬಿಡುತ್ತಾರೆ. ಅವರ ಪ್ರವಚನ ಕಾರ್ಯಕ್ರಮ ಎಲ್ಲಿ ಏರ್ಪಡಿಸಿದರೂ ಸಹ ಅಲ್ಲಿಗೆ ಸಾವಿರಾರು ಸಂಖ್ಯೆಯಲ್ಲಿ ಜನ ಸೇರುತ್ತಾರೆ.. ಒಂದು ಗಂಟೆಯ ಅವರ ಪ್ರವಚನದುದ್ದಕ್ಕೂ ಸೇರಿದ ಅಷ್ಟು ತುಂಬು ತನ್ಮಯತೆಯಿಂದ ಕುಳಿತಿರುತ್ತಾರೆ. ಸೂಜಿಗಲ್ಲಿನಂತಹ ಸೆಳೆತ, ಅವರು ಭಾಷೆ, ಧಾಟಿ, ಪ್ರದಪ್ರಯೋಗ, ಉದಾಹಣೆಗಳ ಮೂಲಕ ಪ್ರಚಲಿತ ಸಂಗತಿಗಳನ್ನು ಸಮ್ಮಿಳಿತಗೊಳಿಸುವರು. ಜೊತೆಗೆ ಕಲ್ಲು, ಮಣ್ಣು, ಗಿಡ, ಮರ, ಹೂ, ಹಕ್ಕು, ಪಕ್ಷಿ, ಪ್ರಾಣಿಗಳಲ್ಲಿ ಜೀವಚೈತನ್ಯವಿದೆ ಎಂಬುದನ್ನು ಅವರು ವಿವರಿಸುವ ರೀತಿ ಅದ್ಬುತವಾದುದು. ತಮ್ಮ ಗುರುಗಳು ಸ್ಥಾಪಿಸಿದ ನೂರಾರು ವಿದ್ಯಾ ಸಂಸ್ಥೆಗಳನ್ನು ಸಿದ್ದೇಶ್ವರರು ಮುಂದುವರಿಸಿಕೊಂಡು ಬರುತ್ತಿದ್ದರೂ ಅವರ ಯಾವ ಸಂಸ್ಥೆಗಳಿಗೂ ಆಶ್ರಮದ ಹೆಸರಾಗಲಿ,ಅವರ ಹೆಸರಾಗಲಿ ಇರುವುದಿಲ್ಲ ಎಂದರೆ ಆಶ್ಚರ್ಯವಲ್ಲವೆ? ಕೆರೆಯ ನೀರನ್ನು ಕೆರೆಗೆ ಚೆಲ್ಲಿ… ಎಂಬ ದಾಸ ವಾಣಿಯಂತೆ ನನ್ನದೇನಿದೆ,ಎಲ್ಲವೂ ಭಗವಂತನದು,ಇಲ್ಲಿರುವ ಪ್ರತಿಯೊಬ್ಬ ಮನುಷ್ಯನೂ ದೇವರು.ಎಲ್ಲರಲ್ಲೂ ದೇವರನ್ನು ಕಾಣಬೇಕು. ನಾನು ನನ್ನದೆಂಬ ಮಮಕಾರ ಸಲ್ಲದು. ಇಹಪರ ಎರಡೂ ಒಂದೆ ಎಂದು ಸಾರುತ್ತ ಅದರಂತೆ ನಡೆಯುತ್ತ ಇರುವ ಅಪರೂಪದ ಯೋಗಿಗಳು ಶ್ರೀ ಸಿದ್ದೇಶ್ವರರು.

ಕನ್ನಡ, ಸಂಸ್ಕೃತ, ಮರಾಠಿ, ಹಿಂದಿ, ಇಂಗ್ಲಿಷ್ ಹಾಗೂ ಪರ್ಷಿಯನ್ ಭಾಷೆಗಳಲ್ಲಿ ಪ್ರಭುತ್ವ ಹೊಂದಿರುವ ಸಿದ್ಧೇಶ್ವರ ಶ್ರೀಗಳು ದೇಶ- ವಿದೇಶಗಳಲ್ಲಿ ನಿರಂತರವಾಗಿ ಪ್ರವಚನ ನೀಡುತ್ತಾರೆ. ಮಲ್ಲಿಕಾರ್ಜುನ ಶ್ರೀಗಳು ಶಿವಾಧೀನರಾದ ನಂತರ ಜ್ಞಾನಯೋಗಾಶ್ರಮದ ಸಂಪೂರ್ಣ ಜವಾಬ್ದಾರಿಯನ್ನು ಟ್ರಸ್ಟ್​ಗೆ ಒಪ್ಪಿಸಿ ಗುರು ಆಣತಿಯಂತೆ ಆಶ್ರಮದಲ್ಲಿ ಶ್ರೀಗಳ ಶಿಷ್ಯವೃಂದದೊಂದಿಗಿರುವುದು ಅವರ ನಿಮೋಹ ಗುಣದ ದ್ಯೋತಕ. ನಮ್ಮ ಸುತ್ತಲಿನ ಪರಿಸರವನ್ನು ಆರಾಧಿಸುವ ಮೂಲಕ ಬದುಕನ್ನು ಅರಿತುಕೊಂಡು ದೇವರ ಅಸ್ತಿತ್ವವನ್ನು ಅರ್ಥೈಸಿಕೊಂಡು ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಮ್ಮ ಪ್ರವಚನಗಳಲ್ಲಿ ಸರಳವಾಗಿ ಪ್ರಸ್ತುತಪಡಿಸುವುದು ಭಕ್ತರನ್ನು ಸೆಳೆಯುತ್ತದೆ. ಅವರ ಪ್ರವಚನಗಳು ಬಾಳಿಗೆ ಬುತ್ತಿಯಿದ್ದಂತೆ ಎಂದರೆ ಅತಿಶಯದ ಮಾತಲ್ಲ. ಅವರ ವಾಣಿಯನ್ನು ಆಲಿಸಲು ಸುತ್ತಮುತ್ತಲಿನ ನೂರಾರು ಕಿ.ಮೀ. ದೂರದಿಂದಲೂ ಜನ ಬರುವುದು ವಿಶೇಷ. ‘ನೀವೆಲ್ಲರೂ ಸ್ವಚ್ಛತೆಯಿಂದ ಇದ್ದು, ಊರನ್ನೂ ಸ್ವಚ್ಛವಾಗಿಟ್ಟುಕೊಂಡಲ್ಲಿ ನಾನು ಪ್ರವಚನ ಮಾಡಲು ಬರುತ್ತೇನೆ’ ಎನ್ನುವ ಮೂಲಕ, ನಯವಾಗಿಯೇ ಸ್ವಚ್ಛತೆಯ ಪಾಠವನ್ನೂ ಮಾಡುತ್ತಾರೆ ಶ್ರೀಗಳು. ಸಮಯಕ್ಕೆ ಅತ್ಯಂತ ಮಹತ್ವ ಕೊಡುವ ಶ್ರೀಗಳು ಅದನ್ನು ಚಾಚೂ ತಪ್ಪದೆ ಪಾಲಿಸುತ್ತಾರೆ. ಸರ್ವರನ್ನೂ ಏಕೋಭಾವದಿಂದ ಕಾಣುತ್ತಾರೆ. ಹಲವು ವಿಶ್ವವಿದ್ಯಾಲಯಗಳು ಗೌರವಿಸಲು, ಗೌರವ ಡಾಕ್ಟರೇಟ್ ಕೊಡಲು ಮುಂದಾಗಿದ್ದರೂ ‘ನಾನೇನು ಸಾಧನೆ ಮಾಡಿದ್ದೇನೆ? ಈ ಗೌರವ ನನಗೆ ಬೇಡ’ ಎಂದು ವಿನಯಪೂರ್ವಕವಾಗಿ ನಿರಾಕರಿಸುವ ವಿಶಿಷ್ಟ ವ್ಯಕ್ತಿತ್ವ ಸಿದ್ಧೇಶ್ವರ ಶ್ರೀಗಳದು. ಪದ್ಮಶ್ರೀ ಪ್ರಶಸ್ತಿ ವಿಚಾರದಲ್ಲೂ ಅವರ ಈ ಪ್ರಶಸ್ತಿ-ಪ್ರಸಿದ್ಧಿ ವೈರಾಗ್ಯದ ಗುಣ ಪ್ರತಿಫಲಿಸಿದೆ.

ದೇಶದ ಉನ್ನತ ನಾಗರಿಕ ಪುರಸ್ಕಾರವಾದ ಪದ್ಮಶ್ರೀ ಪ್ರಶಸ್ತಿಯನ್ನು ವಿಜಯಪುರದ ಸಿದ್ಧೇಶ್ವರ ಶ್ರೀಗಳಿಗೆ ಪದ್ಮಶ್ರೀ ಕೊಡಮಾಡಲಾಗಿತ್ತು. ಆದರೆ ಮರುದಿನವೇ ಶ್ರೀಗಳು ಪ್ರಶಸ್ತಿಯನ್ನು ವಿನಮ್ರವಾಗಿಯೇ ನಿರಾಕರಿಸಿದರು. ಅವರ ಸರಳ, ಪ್ರಸಿದ್ಧಿನಿರಾಕರಣೆಯ ಗುಣ ಬಲ್ಲವರಿಗೆ ಈ ನಿರ್ಧಾರ ಅಂಥ ಅಚ್ಚರಿಯನ್ನೇನೂ ಉಂಟುಮಾಡಲಿಲ್ಲ. ಈ ಹಿಂದೆಯೂ ಅನೇಕ ಪುರಸ್ಕಾರಗಳನ್ನು ನಿರಾಕರಿಸಿದ ನಿದರ್ಶನಗಳಿವೆ. ಹಾಗಂತ ಪ್ರಶ್ತಸಿಗಳನ್ನು ಅನಾದರದಿಂದ ನೋಡುವ ಇರಾದೆಯೇನೂ ಅವರದಲ್ಲ. ‘ನನ್ನ ಕೆಲಸ ನಾನು ಮಾಡಿಕೊಂಡು ಹೋಗುತ್ತೇನೆ, ಅದಕ್ಕೇಕೆ ಪ್ರಶಸ್ತಿ ಪುರಸ್ಕಾರ’ ಎಂಬ ವಿನಮ್ರಭಾವನೆ ಅವರದು.

Contact Us

如果发现了乳房出现了红肿疼痛的情况燕窝酒酿蛋,那么最好去医院外科或者妇科做一个乳腺彩超检查,这样子才能够比较清楚自己的病情丰胸产品,及时采取措施。为了更精确的爱护好女性的乳房丰胸方法,在此我们为您提供丰胸专家为您一对一免费指导!针对性地有效改善乳房!添加WeCha给你丰满健康大乳房粉嫩公主